2014ರ ಬಿಜೆಪಿ ಗೆಲುವು ಐತಿಹಾಸಿಕ; ಹಿಂದುತ್ವವೆಂದರೆ ರಾಷ್ಟ್ರೀಯತೆ: 12ನೇ ತರಗತಿಯ ಪಾಠದ ವಿವರಣೆ!

2014ನೇ ಸಾಲಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಭಾರತೀಯ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 2014ನೇ ಸಾಲಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಾರ್ಟಿಯ ಗೆಲುವು ಐತಿಹಾಸಿಕ ಎಂದು ಎನ್ ಸಿಇಆರ್ ಟಿಯ 12ನೇ ತರಗತಿಯ ಪಠ್ಯಪುಸ್ತಕದಲ್ಲಿ ಹೇಳಲಾಗಿದೆ.

ಸ್ವಾತಂತ್ರ್ಯ ನಂತರ ಭಾರತದ ರಾಜಕೀಯ ಎಂದು ಪುಸ್ತಕದ ಶೀರ್ಷಿಕೆಯಾಗಿದ್ದು ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ದೇಶದ ಮುಸಲ್ಮಾನ ಮಹಿಳೆಯರಿಗೆ ಭಾರತೀಯ ಜನತಾ ಪಾರ್ಟಿ ಬೆಂಬಲಿಸುತ್ತದೆ ಎಂದು ಹೇಳುತ್ತದೆ.

ಪುಸ್ತಕದ ಪಾಠಕ್ಕೆ ಕಮ್ಯುನಲಿಸಂ, ಸೆಕ್ಯುಲರಿಸಂ, ಡೆಮಾಕ್ರಸಿ ಎಂದು ಶೀರ್ಷಿಕೆಯಿಡಲಾಗಿದ್ದು, 1986ರ ನಂತರ ಹಿಂದೂ ರಾಷ್ಟ್ರೀಯ ತತ್ವಗಳನ್ನು ತರಲು ಹೇಗೆ ಒತ್ತಾಯಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲು ಮುಂದಾಗಿದೆ.

ಹಿಂದುತ್ವವೆಂದರೆ ಅಕ್ಷರಶಃ ಹಿಂದೂನೆಸ್ ಎಂಬುದಾಗಿದ್ದು ಅದರ ಮೂಲ ಕರ್ತೃ ವಿ.ಡಿ.ಸಾವರ್ಕರ್, ಅದು ಭಾರತದ ರಾಷ್ಟ್ರೀಯತೆಗೆ ಮೂಲವಾಗಿದೆ. ಭಾರತ ದೇಶದ ಪ್ರಜೆಗಳಾಗಿ ಈ ನೆಲವನ್ನು ತಾಯ್ನಾಡು ಎಂದು ಮಾತ್ರವಲ್ಲದೆ ಪವಿತ್ರ ಭೂಮಿಯೆಂದು ಪ್ರತಿಯೊಬ್ಬ ಪ್ರಜೆಗಳೂ ಪ್ರೀತಿಸಬೇಕೆಂದು ಪಾಠದಲ್ಲಿ ಹೇಳಲಾಗಿದೆ.

ದೇಶದ ಸಂಸ್ಕೃತಿ ಮೇಲೆ ಪ್ರೇಮ, ಕಾಳಜಿ ಇದ್ದರೆ ಮಾತ್ರ ಸಂಯುಕ್ತ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಲಾಗಿದ್ದು 2002ರ ಗೋಧ್ರಾ ನರಮೇಧದಿಂದ ಬಿಜೆಪಿ ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿಯಿಂದ ಹೊರಬರಲು ಮುಂದಾಗಿದೆ. 2002ರ ಗುಜರಾತ್ ಗಲಭೆ ಎಂದು ಪಠ್ಯದೊಳಗೆ ಉಪ ಶೀರ್ಷಿಕೆಯಿದ್ದು ಪಠ್ಯದೊಳಗಿನಿಂದ ಮುಸ್ಲಿಂ ಎಂಬ ಪದವನ್ನು ತೆಗೆಯಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಲು ಎನ್ ಸಿಇಆರ್ ಟಿ ನಿರ್ದೇಶಕ ಹೆಚ್.ಕೆ.ಸೇನಾಪತಿ ಸಿಗಲಿಲ್ಲ. ಎನ್ ಸಿಇಆರ್ ಟಿ ಮಂಡಳಿ ಮೂಲಗಳು ಹೇಳುವ ಪ್ರಕಾರ, 11 ವರ್ಷಗಳ ನಂತರ ಪಠ್ಯಪುಸ್ತಕದ ಪಠ್ಯಗಳನ್ನು ಬದಲಾಯಿಸಲಾಗುತ್ತಿದ್ದು ಅದರ ಸಲುವಾಗಿ ವಿಷಯಗಳನ್ನು ಬದಲಾಯಿಸಲಾಗಿದೆ.

ಕೆಲವು ತತ್ವಗಳನ್ನು ಪ್ರಚಾರ ಮಾಡಲು ತಂತ್ರ ಎನ್ನುವ ಶಿಕ್ಷಣ ತಜ್ಞರು: ಹಲವು ತಿಂಗಳುಗಳ ಕಾಲ ವಿಷಯ ತಜ್ಞರುಗಳ ಜೊತೆ ಚರ್ಚೆ ನಡೆಸಿ ಎನ್ ಸಿಇಆರ್ ಟಿ ಪಠ್ಯಪುಸ್ತಕದಲ್ಲಿ ಬದಲಾವಣೆ ತರಲಾಗಿದೆ. ಇದರ ಸಲುವಾಗಿ ದೇಶದಲ್ಲಿನ ಇತ್ತೀಚಿನ ಸಮಕಾಲೀನ ವಿಷಯಗಳನ್ನು ಮತ್ತು ಇತ್ತೀಚಿನ ಬೆಳವಣಿಗೆಗಳನ್ನು ಸೇರಿಸಲಾಗಿದೆ ಎಂದು ಎನ್ ಸಿಇಆರ್ ಟಿ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ನಿಗದಿತ ತತ್ವಗಳನ್ನು ಪ್ರಚಾರ ಮಾಡುವ ವಿಸ್ತಾರ ತಂತ್ರವಿದು ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ. ವಿದ್ಯಾರ್ಥಿಗಳ ಪಠ್ಯಪುಸ್ತಕದಲ್ಲಿ ಆಳುವ ಸರ್ಕಾರಗಳು ತಮ್ಮ ತತ್ವ, ಸಿದ್ದಾಂತಗಳನ್ನು ಹೇರಲು ಪ್ರಯತ್ನಿಸುವುದು ಸಾಮಾನ್ಯ. ಈಗಿನ ಸರ್ಕಾರ ಇತಿಹಾಸವನ್ನು ತಿರುಚಲು ಪ್ರಯತ್ನಿಸುತ್ತಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ಕಮಲ ನೆಹರೂ ಕಾಲೇಜಿನ ರಾಜಕೀಯ ವಿಜ್ಞಾನ ಅಧ್ಯಾಪಕ ಅಂಬರ್ ಅಹ್ಮದ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com